ದೇವರು ಹಳೇ ಒಡಂಬಡಿಕೆಯಲ್ಲಿ ಮೋಸಗೆ ಗೂಢಾರವನ್ನು ಕಟ್ಟಲು ಹೇಳಿದಂತೆ ಹೊಸ ಒಡಂಬಡಿಕೆಯಲ್ಲಿ ನಾವು ಸಹ ನಮ್ಮ ಪ್ರತಿಯೊಬ್ಬರ ಹೃದಯದಲ್ಲಿ ಆರಾಧನಾ ಮಂದಿರವನ್ನು ಕಟ್ಟಬೇಕೆಂಬುದಾಗಿ ಬಯಸುತ್ತಾನೆ. ಹಾಗಾಗಿ ಆತನ ನಮ್ಮಲ್ಲಿ ನೆಲೆಗೊಂಡಿರುತ್ತಾನೆ. ನಮ್ಮ ಹೃದಯದಲ್ಲಿ ದೇವಾಲಯವನ್ನು ಕಟ್ಟಲು ಬೇಕಾಗಿರುವ ಸಾಮಗ್ರಿಗಳೆಂದರೆ ನೀರು ಮತ್ತು ಆತ್ಮನ ಸುವಾರ್ತೆಯ ವಾಕ್ಯಗಳು. ನೀರು ಮತ್ತು ಆತ್ಮನ ಈ ಸುವಾರ್ತೆಯಿಂದ ನಮ್ಮಲ್ಲಿ ಪಾಪಗಳನ್ನು ತೆಗೆದುಹಾಕಿ ಪರಿಶುದ್ಧಗೊಳ್ಳಬಹುದು.
ಆತನಿಗೊಂದು ಆರಾಧನಾ ಮಂದಿರವನ್ನು ಕಟ್ಟುವಂತೆ ಹೇಳುತ್ತಾ ನಮ್ಮ ಹೃದಯವನ್ನು ಮುಕ್ತಮಾಡಿ ನೀರು ಮತ್ತು ಆತ್ಮನ ಸುವಾರ್ತೆಯನ್ನು ನಂಬುವಂತೆ ತಿಳಿಸುತ್ತಾನೆ. ನಾವೆಲ್ಲರು ನೀರು ಮತ್ತು ಆತ್ಮನ ಸುವಾರ್ತೆಯನ್ನು ನಂಬುವುದರಿಂದ ನಮ್ಮ ಹೃದಯಗಳನ್ನು ಶುದ್ಧಿಮಾಡೋಣ.
ನೀರು ಮತ್ತು ಆತ್ಮನ ಸುವಾರ್ತೆಯ ಸತ್ಯವನ್ನು ನಂಬುವುದರಿಂದ ನಾವು ನಮ್ಮ ಹೃದಯದ ಎಲ್ಲಾ ಪಾಪಗಳನ್ನು ತೊಳೆಯುವುದಾದರೆ ಆಗ ದೇವರು ಅಲ್ಲಿಗೆ ಬಂದು ನೆಲೆಗೊಂಡಿರುತ್ತಾನೆ. ನೀರು ಮತ್ತು ಆತ್ಮನ ಸುವಾರ್ತೆಯನ್ನು ಸತ್ಯವನ್ನು ನಂಬುವುದರಿಂದ ಮಾತ್ರವೇ ನೀವು ನಮ್ಮ ಹೃದಯಗಳಲ್ಲಿ ಪರಿಶುದ್ಧವಾದ ದೇವಾಲಯವನ್ನು ನಿರ್ಮಿಸಬಹುದು. ಇದು ಇಲ್ಲಿಯ ತನಕದಕ್ಕಿಂತಲೂ ಮಹತ್ವ ಪೂರ್ಣದ್ದಾಗಿದೆ. ಕೊನೆ ಪಕ್ಷ ನಮ್ಮಲ್ಲಿ ಕೆಲವರಾದರೂ ನಿಮ್ಮ ಹೃದಯವು ತೊಳೆಯಲ್ಪಡಬೇಕೆಂಬ ಪಶ್ಛಾತ್ತಾಪದ ಪ್ರಾರ್ಥನೆಯನ್ನು ಅರ್ಪಿಸುತ್ತೀರಿ. ನಿಮ್ಮ ಹೃದಯದಲ್ಲಿ ದೇವಾಲಯವನ್ನು ನಿರ್ಮಿಸಲು ಪ್ರಯತ್ನಿಸುತ್ತೀರಿ. ಆದರೆ ನೀರು ಮತ್ತು ಆತ್ಮನ ಸುವಾರ್ತೆಯನ್ನು ನಂಬುವುದರ ಮೂಲಕ ತಪ್ಪು ನಂಬಿಕೆಯನ್ನು ಬಿಟ್ಟು ನಿಮ್ಮ ಮನಸ್ಸನ್ನು ನೂತನ ಪಡಿಸಿಕೊಂಡು ಮನಸ್ಸಾಂತರ ಹೊಂದಲು ನಿಮಗಿದು ಸಮಯವಾಗಿದೆ.