ಪರಿವಿಡಿ
ಮುನ್ನುಡಿ
ಅಧ್ಯಾಯ 1
1. ಕರ್ತನು ನಮ್ಮನ್ನು ಈ ದುಷ್ಟ ಲೋಕದಿಂದ ಬಿಡುಗಡೆ ಗೊಳಿಸಿದ್ದಾನೆ (ಗಲಾತ್ಯದವರಿಗೆ 1:1-5)
2. ನಿಮ್ಮ ನಂಬಿಕೆ ಬಹುಶಃ ಸುನ್ನತಿ ಮಾಡುವವರಂತೆ ಅಲ್ಲವೇ? (ಗಲಾತ್ಯದವರಿಗೆ 1:1-5)
3. ಕರ್ತನು ನಮ್ಮನ್ನು ಒಂದೇ ಬಾರಿಗೆ ಮತ್ತು ಪರಿಪೂರ್ಣವಾಗಿ ರಕ್ಷಿಸಿದ್ದಾನೆ (ಗಲಾತ್ಯದವರಿಗೆ 1:3-5)
4. ನೀರು ಮತ್ತು ಆತ್ಮನ ಸುವಾರ್ತೆಯನ್ನು ಹೊರತುಪಡಿಸಿ ಬೇರೆ ಯಾವುದೇ ಸುವಾರ್ತೆ ಇರಲು ಸಾಧ್ಯವಿಲ್ಲ (ಗಲಾತ್ಯದವರಿಗೆ 1:6-10)
5. ದೇವರ ಸೇವಕರುಗಳುನ್ನಾಗಿಸಿ ಕೊಂಡಂತವರ ಹೃದಯಗಳು (ಗಲಾತ್ಯದವರಿಗೆ 1:10-12)
6. ಧರ್ಮಪ್ರಚಾರಕನಾದ ಪೌಲನ ನಂಬಿಕೆ ಮತ್ತು ಸುನ್ನತಿ ಮಾಡುವವರಿಗೆ ಆತನ ಉಪದೇಶ (ಗಲಾತ್ಯದವರಿಗೆ 1:1-17)
7. ನ್ಯಾಯಪ್ರಮಾಣಕ್ಕೆ ಬದ್ದವಾದ ನಂಬಿಕೆಯು ಜೀವನ ಶಾಪಗಳನ್ನು ಮಾತ್ರ ತರುತ್ತದೆ (ಗಲಾತ್ಯದವರಿಗೆ 1:1-24)
ಅಧ್ಯಾಯ 2
1. ಧರ್ಮಪ್ರಚಾರಕನಾದ ಪೌಲನು ನ್ಯಾಯಪ್ರಮಾಣರನ್ನು ಯಾಕೆ ಕಡೆಗಣಿಸಿದನು? (ಗಲಾತ್ಯದವರಿಗೆ, 2:1-10)
2. ಪೌಲನ ನಂಬಿಕೆಯ ಸಾರ (ಗಲಾತ್ಯದವರಿಗೆ 2:20)
3. ನಾವು ದೇವಕುಮಾರನ ಮೇಲಿನ ನಂಬಿಕೆಯಿಂದಾಗಿ ಆತನೊಂದಿಗೆ ಸತ್ತಿದ್ದೇವೆ ಮತ್ತು ಪುನರುತ್ಥಾನ ಗೊಂಡಿದ್ದೇವೆಯೇ? (ಗಲಾತ್ಯದವರಿಗೆ 2:20)
4. ಒಬ್ಬ ಮನುಷ್ಯನು ನ್ಯಾಯಪ್ರಮಾಣದ ಕಾರ್ಯಗಳಿಂದ ಸಮರ್ಥಿಸಲ್ಪಡು ವುದಿಲ್ಲ ಆದರೆ ನೀರು ಮತ್ತು ಆತ್ಮನ ವಾರ್ತೆಯಲ್ಲಿನ ನಂಬಿಕೆಯಿಂದಲೇ (ಗಲಾತ್ಯದವರಿಗೆ 2:11-21)
5. ನಾವು ಶುದ್ಧ ನಂಬಿಕೆಯಿಂದ ಮಾತ್ರವೇ ಸಮರ್ಥಿಸಲ್ಪಟ್ಟಿದ್ದೇವೆ (ಗಲಾತ್ಯದವರಿಗೆ 2:11-21)
ಅಧ್ಯಾಯ 3
1. ನೀವು ಯಾವಾಗಲೂ ನೀರು ಮತ್ತು ಆತ್ಮನ ಸುವಾರ್ತೆಯಲ್ಲಿನ ನಂಬಿಕೆಯಿಂದ ನಿಮ್ಮ ಜೀವನವನ್ನು ನಡೆಸಬೇಕು (ಗಲಾತ್ಯದವರಿಗೆ 3:1-11)
2. ನಮ್ಮ ಹೃದಯದ ಶೂನ್ಯತೆ ಯಾವಾಗ ಮಾಯವಾಗುತ್ತದೆ? (ಗಲಾತ್ಯದವರಿಗೆ 3:23-29)
3. ಈಗ ನಾವು ಇನ್ನು ಮುಂದೆ ನ್ಯಾಯಪ್ರಮಾಣದ ಶಾಪಗಳ ಅಡಿಯಲ್ಲಿರಬೇಕಾಗಿಲ್ಲ (ಗಲಾತ್ಯದವರಿಗೆ 3:1-29)
ನೀವು ಆಧ್ಯಾತ್ಮಿಕ ಅನಾರೋಗ್ಯವನ್ನು ಪಡೆಯಲು ಮಾನಸಾಂತರದ ಸಿದ್ಧಾಂತವು ಸಾಕು.
ಪ್ರಪಂಚದಾದ್ಯಂತ ಜನರು SARS ನಂತಹ ರೋಗಾಣುಗಳಿಗೆ ಹೆದರುತ್ತಾರೆ, ಯಾಕೆಂದರೆ ಅವರು ಅಂತಹ ಅದೃಶ್ಯ ರೋಗಾಣುಗಳಿಗೆ ಒಡ್ಡಿಕೊಳ್ಳುವುದರಿಂದ ಸಾಯಬಹುದು. ಅಂತೆಯೇ, ಈ ದಿನಗಳಲ್ಲಿ ಪ್ರಪಂಚದಾದ್ಯಂತ ಕ್ರೈಸ್ತರು ಮಾನಸಾಂತರದ ಸಿದ್ಧಾಂತದಿಂದ ಸೋಂಕಿಗೆ ಒಳಗಾಗುವ ಮೂಲಕ ತಮ್ಮ ದೇಹ ಮತ್ತು ಆತ್ಮಗಳಲ್ಲಿ ಸಾಯುತ್ತಿದ್ದಾರೆ. ಮಾನಸಾಂತರದ ಸಿದ್ಧಾಂತವು ತುಂಬಾ ತಪ್ಪಾಗಿದೆ ಎಂದು ಯಾರಿಗೆ ತಿಳಿದಿದೆ? ಕ್ರೈಸ್ತರನ್ನು ಆಧ್ಯಾತ್ಮಿಕ ಗೊಂದಲದ ಪ್ರಪಾತಕ್ಕೆ ಬೀಳುವಂತೆ ಮಾಡಿದವರು ಯಾರು ಎಂದು ನಿಮಗೆ ತಿಳಿದಿದೆಯೇ? ಅವರು ಕ್ರೈಸ್ತ ಪಾಪಿಗಳಾಗಿದ್ದು, ತಮ್ಮ ವೈಯಕ್ತಿಕ ಪಾಪಗಳನ್ನು ಶುದ್ಧೀಕರಿಸಲು ಪ್ರತಿದಿನ ಮಾನಸಾಂತರದ ಪ್ರಾರ್ಥನೆಗಳನ್ನು ನೀಡುತ್ತಾರೆ ಮತ್ತು ಯೇಸು ಕ್ರಿಸ್ತನನ್ನು ತಮ್ಮ ರಕ್ಷಕನು ಎಂದು ನಂಬುವುದಾಗಿ ಹೇಳಿಕೊಳ್ಳುತ್ತಾರೆ. ಆದ್ದರಿಂದ, ದೇವರು ನಮಗೆ ಮೂಲತಃ ನೀಡಿದ ನೀರು ಮತ್ತು ಆತ್ಮದ ಸುವಾರ್ತೆಯ ವಾಕ್ಯವನ್ನು ನಂಬುವ ಮೂಲಕ ನೀವು ಪಾಪಗಳ ಪರಿಹಾರವನ್ನು ಪಡೆಯಬೇಕು. ಮತ್ತೆ ಹುಟ್ಟುವ ಆಶೀರ್ವಾದದ ಅವಕಾಶವನ್ನು ನೀವು ಕಳೆದುಕೊಳ್ಳಬಾರದು. ನೀರು ಮತ್ತು ಆತ್ಮದ ಸುವಾರ್ತೆಯ ಸತ್ಯವನ್ನು ನಂಬುವ ಮೂಲಕ ನಾವೆಲ್ಲರೂ ಆಧ್ಯಾತ್ಮಿಕ ಗೊಂದಲದ ಕರಾಳ ಸುರಂಗದಿಂದ ಪಾರಾಗಬೇಕು. ನಂತರ, ನೀರು ಮತ್ತು ಆತ್ಮದ ಸುವಾರ್ತೆಯಿಂದ ಬಂದ ಸತ್ಯದ ಪ್ರಕಾಶಮಾನವಾದ ಬೆಳಕನ್ನು ನಾವು ನೋಡಬಹುದು.
ច្រើនទៀត